rAma embuva eraDu aksharada mahimeyanu
pAmararu tAvEnu ballarayya
rA endamAtradoLu rakta mAmsadoLidda
AyasthigatavAda atipApavannu
mAyavanu mADI maharAya muktiyakoDuva
dAyavanu vAlmIki munirAya balla
matte mA endenalu horabiddapApagaLu
ottivaLapOgadante bAgilanu mucchi
chittakAyagaLa pavitramADuva pariya
bhaktavara haumantanobba tA balla
dhareyoLI nAmakke sarimigilu illendu
parama vEdagaLella pogaLutihavu
siriyarasa purandaraviTTalana nAmavanu
sirikAshiyoLagippa shivanu tA balla
Kannada:
ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು
ಪಾಮರರು ತಾವೇನು ಬಲ್ಲರಯ್ಯ |
'ರಾ' ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ
ಆಯಸ್ಥಿಗತವಾದ ಅತಿ ಪಾಪವನ್ನು
ಮಾಯವನು ಮಾಡಿ ಮಹರಾಯ ಮುಕ್ತಿಯ ಕೊಡುವ
ದಾಯವನು ವಾಲ್ಮೀಕಿ ಮುನಿರಾಯ ಬಲ್ಲ ||
ಮತ್ತೆ 'ಮ' ಎಂದೆನಲು ಹೊರಬಿದ್ದ ಪಾಪಗಳು
ಒತ್ತಿ ಒಳಪೊಗದಂತೆ ಕವಾಟವಾಗಿ ಚಿತ್ತ
ಕಾಯಗಳ ಪವಿತ್ರ ಮಾಡುವ ಪರಿಯ
ಭಕ್ತವರ ಹನುಮಂತನೊಬ್ಬ ತಾ ಬಲ್ಲ
ಧರೆಯೊಳೀ ನಾಮಕ್ಕೆ ಸರಿಮಿಗಿಲು ಇಲ್ಲೊಂದು
ಪರಮ ವೇದಗಳೆಲ್ಲ ಪೊಗಳುತಿಹವು |
ಸಿರಿಯರಸ ಪುರಂದರ ವಿಟ್ಠಲನ ನಾಮವನು
ಸಿರಿಕಾಶಿಯೊಳಗಿಪ್ಪ ಶಿವನು ತಾ ಬಲ್ಲ
No comments:
Post a Comment