ಜಯತು ಕೋದಂಡರಾಮ ಜಯತು ದಶರಥರಾಮ
ಜಯತು ಸೀತಾರಾಮ ಜಯತು ರಘುರಾಮ ಜಯತು ಜಯತು|ಪ|ತಮದೈತ್ಯನನು ಮಡುಹಿ ಮಂದರಾಚಲ ನೆಗಹಿ
ಪ್ರೀತಿಯಿಂದಲಿ ತಂದು ಸಕಲ ಭೂತಳವ
ಕ್ಷೇತ್ರದಿಂದುದ್ಭವಿಸಿ ಮೊರೆಯಿಡುವ ಬಾಲಕನ
ಭೀತಿಯನು ಬಿಡಿಸಿ ನೆರೆಕಾಯ್ದ ರಘುರಾಮ |1|
ಬಲಿಯೊಳ್ ದಾನವ ಮಾಡಿ ನೆಲನ ಈರಡಿ ಮಾಡಿ
ಛಲದಿಂದ ಕ್ಷತ್ರಿಯರ ಕುಲವ ಹೋಗಾಡಿ
ಲಲನೆಗೋಸುಗ ಬಂದ ನೆವದಿಂದ ರಾವಣನ
ತಲೆಗಳನು ಚೆಂಡಾದಿ ಮೆರೆದ ರಘುರಾಮ|2|
ಎಸೆವ ತುರಗವನೇರಿ ಮಲ್ಲರನು ಸವರಿ
ವಸುಧೆಯೊಳು ಪುರಂದರವಿಠಲ ನೀ ಪಾಲಿಸೈ
ಬಿಸಜಾಕ್ಷಯೋಧ್ಯಪುರವಾಸ ರಘುರಾಮ |3|
English
jayatu kodandarama jayatu dasharatharama
jayatu seetha rama jayatu raghurama jayatu jayatu |pa|
Tama daityananu maduhi mandara jala negahi
kshetra dindudbhavisi more yiduva balakana
bhitiyanu bidisi nerekaiydu raghurama |1|
baliyol danava maadi nelana iradi maadi
chaladinda kshatriyara kulava hogadi
lalanegosuga banda nevadinda ravana
talegalannu chendadi mereda raghurama|2|
vasudevasutanenisi vaniteyara vratagedisi
eseva turagavaneri mallaranu savari
vasudeyolu purandara vittala nee palisai
bisajaksha yodya puravasa raghurama
No comments:
Post a Comment