Arige vadhuvAde ambujAkshi
ksheerabdhi kannike shri mahalakumi ||
sharadhi bandhana
rAmachandra mUrutigo
paramAtma
ananta padmanabhanigo
sarasijanAbha
janArdhana mUrutigo
eraDu hoLeya ranga parTaNa vAsanigo
cheluva bEluru
chennigarAyanigo
geLati
hELu udupiya krishNarAyanigo
iLeyALu pandarApura
viTaleshago
naLinAkshi
pELu badari nArAyaNago
malaya jagandhi bindhu
mAdhavarAyago
sulabha devara deva
purushOtamago
phaladAyaka
nitya mangaLa nAyakago
cheluve nAchade pELu shri
venkaTeshago
vAsavArchita kanchi
varadarAjanigo
asuradi shri mushNa varAhanigo
shEshashAyiyAda
shriman nArAyaNago
sAsira
nAmadoDeya aLagireeshago
sharaNAgata poreva sAranga pANigo
varagaLa neeva
shrinivAsago
kurukulAntaka namma rAja
gOpAlago
sthiravAgi pELu purandara
viTTala rAyanigo
Kannada:
ಕ್ಷೀರಾಬ್ಧಿ ಕನ್ನಿಕೆ ಶ್ರೀ ಮಹಾಲಕ್ಷ್ಮೀ
ಯಾರಿಗೆ ವಧುವಾಗುವೆ ಮಹಾಲಕ್ಷ್ಮೀ .,
ಯಾರಿಗೆ ವಧುವಾಗುವೆ ನೀನು, ಯಾರಿಗೆ ವಧುವಾಗುವೆ
ಶರಧಿ ಬಂಧನ ರಾಮಚಂದ್ರ ಮೂರ್ತಿಗೋ
ಪರಮಾತ್ಮ ಅನಂತಪದ್ಮನಾಭಗೋ
ಸರಸಿಜನಾಭ ಶ್ರೀ ಜನಾರ್ದನ ಮೂರ್ತಿಗೋ
ಉಭಯ ಕಾವೇರಿರಂಗ ಪಟ್ಟಣದರಸಗೋ || ಯಾರಿಗೆ ವಧುವಾಗುವೆ ||
ಚೆಲುವ ಮೂರುತಿ ಬೇಲೂರ ಚೆನ್ನಿಗರಾಯನಿಗೋ
ಗೆಳತಿ ಪೇಳೆ ಉಡುಪಿ ಶ್ರೀ ಕೃಷ್ಣ ರಾಯಗೋ
ಇಳೆಯೊಳು ಪಾಂಡುರಂಗ ವಿಠ್ಠಲರಾಯಗೋ
ನಳಿನಾಕ್ಷಿ ಪೇಳಮ್ಮ ಬದರಿ ನಾರಾಯಣಗೋ || ಯಾರಿಗೆ ವಧುವಾಗುವೆ ||
ಮಲಯಜಗಂಧಿ ಬಿಂದು ಮಾಧವ ರಾಯನಿಗೋ
ಸುಲಭ ದೇವರು ಪುರುಷೋತ್ತಮಗೋ
ಫಲದಾಯಕ ನಿತ್ಯ ಮಂಗಳ ದಾಯಕಗೋ
ಚೆಲುವೆ ನಾಚದೆ ಪೇಳೆ ಶ್ರೀ ವೆಂಕಟೇಶಗೋ || ಯಾರಿಗೆ ವಧುವಾಗುವೆ ||
ವಾಸವಾರ್ಚಿತ ಕಂಚೀ ವರದರಾಜಗೋ
ಆ ಶ್ರೀ ಮುಷ್ನದಲ್ಲಿ ಆದಿವರಾಹನಿಗೋ
ಶೇಷಶಾಯಿಯಾದ ಶ್ರೀಮನ್ನಾರಾಯಣಗೋ
ಸಾಸಿರ ನಾಮದೊಡೆಯ ಅಳಗಿರೀಶಗೋ ||ಯಾರಿಗೆ ವಧುವಾಗುವೆ ||
ಶರಣಾಗತ ರಕ್ಷಕ ಸಾರಂಗಪಾಣಿಗೋ
ವರಗಳ ನೀಡುವ ಶ್ರೀನಿವಾಸಗೊ
ಕುರುಕುಲಾಂತಕ ರಾಜ ಗೋಪಾಲ ಮೂರ್ತಿಗೊ
ಸ್ಥಿರವಾಗಿ ಪುರಂದರ ವಿಠ್ಠಲ ರಾಯಗೋ || ಕ್ಷೀರಾಬ್ಧಿ ಕನ್ನಿಕೆ ||
Also View: