Links

Tuesday, May 29, 2018

8. Krishna moorthi kanna munde



krishNamUrti kaNNa munde nintidantide |p|
kashTagaLellava pariharisi mana
dishTArthagaLanella koTTu rakshisuvanta |a|


mastakadali mANikada kirITa
kastUri tilakadi hOLeva lalATa
shishtili koLalanUduva OrenOTa
kaustubha eDabaladalli OlATa |1|


maghamaghisuva sobagina suLiguruLu
ciguru tulasi vanamAleya koraLu
bagebage hoNNunguraviTTa beraLu
sobagina nAbhiya tAvareyaraLu |2|


uDudAra vaDyANa sakalAbharaNa
beDagu pItAmbara shataravi kiraNa
kadaga gaggara peNDeyaniTTu caraNa
oDeya purandara viTTalana karuNa |3|


Kannada:

ಕ್ರಿಶ್ಣಮೂರ್ತಿ ಕಣ್ಣ ಮುನ್ದೆ ನಿನ್ತಿದನ್ತಿದೆ |ಪ್|
ಕಶ್ಟಗಳೆಲ್ಲವ ಪರಿಹರಿಸಿ ಮನ
ದಿಶ್ಟಾರ್ಥಗಳನೆಲ್ಲ ಕೊಟ್ಟು ರಕ್ಶಿಸುವನ್ತ |ಅ|

ಮಸ್ತಕದಲಿ ಮಾಣಿಕದ ಕಿರೀಟ
ಕಸ್ತೂರಿ ತಿಲಕದಿ ಹೋಳೆವ ಲಲಾಟ
ಶಿಶ್ತಿಲಿ ಕೊಳಲನೂದುವ ಓರೆನೋಟ
ಕೌಸ್ತುಭ ಎಡಬಲದಲ್ಲಿ ಓಲಾಟ |೧|

ಮಘಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಲಸಿ ವನಮಾಲೆಯ ಕೊರಳು
ಬಗೆಬಗೆ ಹೊಣ್ಣುನ್ಗುರವಿಟ್ಟ ಬೆರಳು
ಸೊಬಗಿನ ನಾಭಿಯ ತಾವರೆಯರಳು |೨|

ಉಡುದಾರ ವಡ್ಯಾಣ ಸಕಲಾಭರಣ
ಬೆಡಗು ಪೀತಾಮ್ಬರ ಶತರವಿ ಕಿರಣ
ಕದಗ ಗಗ್ಗರ ಪೆಣ್ಡೆಯನಿಟ್ಟು ಚರಣ

ಒಡೆಯ ಪುರನ್ದರ ವಿಟ್ಟಲನ ಕರುಣ |೩|

6. pOgAdirElO ranga



pOgAdirElO ranga bagilindAce |p|
bAgAvataru kANdu etti koNDoyvAru |a|


suramunigaLu tamma hrudaya gafvara dalli
paramAtmana kANade arasuvaru
dorakAda vastuvu dorakItu tamagendu
harushAdindali ninna karedetii kombuvaru |1|


agaNitaguNa ninna jagada nAriyarella
hageyAgi nuDivarO gopAlanE
magugaLa mANikya tagutitu karakendu
vegAdindali bandu bigidappikombuvaru |2|


diTTa nAriyarella isTava salisendu
aTTaTTi bennaTTi tiruguvarO
srushTIsha purandara viTTala rAyane
isTishTu beNNeyA koTTenO rangayya |3|


Kannada:

ಪೋಗಾದಿರೇಲೋ ರನ್ಗ ಬಗಿಲಿನ್ದಾಚೆ |ಪ್|
ಬಾಗಾವತರು ಕಾಣ್ದು ಎತ್ತಿ ಕೊಣ್ಡೊಯ್ವಾರು |ಅ|

ಸುರಮುನಿಗಳು ತಮ್ಮ ಹ್ರುದಯ ಗಫ಼್ವರ ದಲ್ಲಿ
ಪರಮಾತ್ಮನ ಕಾಣದೆ ಅರಸುವರು
ದೊರಕಾದ ವಸ್ತುವು ದೊರಕೀತು ತಮಗೆನ್ದು
ಹರುಶಾದಿನ್ದಲಿ ನಿನ್ನ ಕರೆದೆತಿಇ ಕೊಮ್ಬುವರು |೧|

ಅಗಣಿತಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿವರೋ ಗೊಪಾಲನೇ
ಮಗುಗಳ ಮಾಣಿಕ್ಯ ತಗುತಿತು ಕರಕೆನ್ದು
ವೆಗಾದಿನ್ದಲಿ ಬನ್ದು ಬಿಗಿದಪ್ಪಿಕೊಮ್ಬುವರು |೨|

ದಿಟ್ಟ ನಾರಿಯರೆಲ್ಲ ಇಸ್ಟವ ಸಲಿಸೆನ್ದು
ಅಟ್ಟಟ್ಟಿ ಬೆನ್ನಟ್ಟಿ ತಿರುಗುವರೋ
ಸ್ರುಶ್ಟೀಶ ಪುರನ್ದರ ವಿಟ್ಟಲ ರಾಯನೆ

ಇಸ್ಟಿಶ್ಟು ಬೆಣ್ಣೆಯಾ ಕೊಟ್ಟೆನೋ ರನ್ಗಯ್ಯ |೩|

Pogaladire ranga

See also:

adaddalle olide ayitu
navaratna malike

5. sakala graha bala



pallavi
sakala graha bala nInE sarasijAkSa nikhila rakSaka nInE vishva vyApaghanE
anupallavi
ravicandra budha nInE rAhu kEtuvu nInE kavi guru shaniyu mangaLamu nInE
caraNam 1
diva rAtriyu nInE nava dhAnyavu nInE bhavarOga hara nInE bhESajanu nInE
pakSa mAsavu nInE parva kAlavu nInE nakSatra yOga tithi karaNagaLu nInE
caraNam 2
rtu vatsaravu brduvyugAdiyu nInE kratu hOma sadbhaktiyu nInEMbr nutanAgi ennoDeya purandara viThalanE shrutigE silukada apratima mahima nInE

Kannada:

ಪಲ್ಲವಿ

ಸಕಲ ಗ್ರಹ ಬಲ ನೀನೇ ಸರಸಿಜಾಕ್ಶ ನಿಖಿಲ ರಕ್ಶಕ ನೀನೇ ವಿಶ್ವ ವ್ಯಾಪಘನೇ

ಅನುಪಲ್ಲವಿ

ರವಿಚನ್ದ್ರ ಬುಧ ನೀನೇ ರಾಹು ಕೇತುವು ನೀನೇ ಕವಿ ಗುರು ಶನಿಯು ಮನ್ಗಳಮು ನೀನೇ

ಚರಣಮ್ ೧

ದಿವ ರಾತ್ರಿಯು ನೀನೇ ನವ ಧಾನ್ಯವು ನೀನೇ ಭವರೋಗ ಹರ ನೀನೇ ಭೇಶಜನು ನೀನೇ
ಪಕ್ಶ ಮಾಸವು ನೀನೇ ಪರ್ವ ಕಾಲವು ನೀನೇ ನಕ್ಶತ್ರ ಯೋಗ ತಿಥಿ ಕರಣಗಳು ನೀನೇ

ಚರಣಮ್ ೨

ರ್ತು ವತ್ಸರವು ಬ್ರ್ದುವ್ಯುಗಾದಿಯು ನೀನೇ ಕ್ರತು ಹೋಮ ಸದ್ಭಕ್ತಿಯು ನೀನೇಂಬ್ರ್  ನುತನಾಗಿ ಎನ್ನೊಡೆಯ ಪುರನ್ದರ ವಿಠಲನೇ ಶ್ರುತಿಗೇ ಸಿಲುಕದ ಅಪ್ರತಿಮ ಮಹಿಮ ನೀನೇ


Adiyali gajamukhana



Adiyali gajamukhana arcisi Arambhisalu
Ava bage kAryatati siddhigoḷisi
mOdadim salisuva manadiṣṭava
sAdhu janarella kEḷi sakala surariṅge
mAdhavanE nEmisippa iyadhikārava
adaradinda avaravaroḷu nindu karyagaḷa
bhEdagoḷisade mAlpa purandaraviṭhala ||

Kannada:

ಆದಿಯಲಿ ಗಜಮುಖನ ಅರ್ಚಿಸಿ ಆರಂಭಿಸಲು
ಆವ ಬಗೆ ಕಾರ್ಯತತಿ ಸಿದ್ಧಿಗೊಳಿಸಿ
ಮೋದದಿಂ ಸಲಿಸುವ ಮನದಿಷ್ಟವ
ಸಾಧು ಜನರೆಲ್ಲ ಕೇಳಿ ಸಕಲ ಸುರರಿಂಗೆ
ಮಾಧವನೇ ನೇಮಿಸಿಪ್ಪ ಈಯಧಿಕಾರವ
ಆದರದಿಂದ ಅವರವರೊಳು ನಿಂದು ಕಾರ್ಯಗಳ
ಭೇದಗೊಳಿಸದೆ ಮಾಳ್ಪ ಪುರಂದರವಿಠಲ ||

Vidyabhushan: Youtube

See also:

adaddalle olide ayitu
navaratna malike

Monday, May 28, 2018

illiralAre allige hOgalAre pullanAbha


pallavi
illiralAre allige hOgalAre pullanAbha nIniddalli sErisenna
caraNam 1

maraNavanolle jananavanolle durita samsAra koDaleya nAnolle
karuNadi karugaLa kAida gOvaLa ninna caraNa kamalada smaraNeyoLirisenna

caraNam 2

benda samsAravembo bene madhyadali nondeno nA bahaLa kara kareyalli
nandagOpana kanda vrndAvana priya endendu ninna smaraNeyoLirisenna

caraNam 3

putra mitra kaLatra bandhugaLemba kattaleyoLu siluki kaDu nondenalla
mukti dAyaka uDupiya krSNarAya bhaktavatsala purandara viTTala


Kannada:

ಪಲ್ಲವಿ

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಪುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ

ಚರಣಮ್ ೧ 

ಮರಣವನೊಲ್ಲೆ ಜನನವನೊಲ್ಲೆ ದುರಿತ ಸಮ್ಸಾರ ಕೊಡಲೆಯ ನಾನೊಲ್ಲೆ 
ಕರುಣದಿ ಕರುಗಳ ಕಾಇದ ಗೋವಳ ನಿನ್ನ ಚರಣ ಕಮಲದ ಸ್ಮರಣೆಯೊಳಿರಿಸೆನ್ನ

ಚರಣಮ್ ೨ 

ಬೆನ್ದ ಸಮ್ಸಾರವೆಮ್ಬೊ ಬೆನೆ ಮಧ್ಯದಲಿ ನೊನ್ದೆನೊ ನಾ ಬಹಳ ಕರ ಕರೆಯಲ್ಲಿ 
ನನ್ದಗೋಪನ ಕನ್ದ ವ್ರ್ನ್ದಾವನ ಪ್ರಿಯ ಎನ್ದೆನ್ದು ನಿನ್ನ ಸ್ಮರಣೆಯೊಳಿರಿಸೆನ್ನ

ಚರಣಮ್ ೩ 

ಪುತ್ರ ಮಿತ್ರ ಕಳತ್ರ ಬನ್ಧುಗಳೆಮ್ಬ ಕತ್ತಲೆಯೊಳು ಸಿಲುಕಿ ಕಡು ನೊನ್ದೆನಲ್ಲ 
ಮುಕ್ತಿ ದಾಯಕ ಉಡುಪಿಯ ಕ್ರ್ಶ್ಣರಾಯ ಭಕ್ತವತ್ಸಲ ಪುರನ್ದರ ವಿಟ್ಟಲ

Hari hararu hege samaru


Hari hararu hege samaru
Harihara Baktare idake sakshi ||pa||
Hariya mandira vaikunthasthana
Harana mandira smasana
Hariya pattada rani siridevi embaru
Harana pattada rani girije embaru ||
Hariyu uduvodu pitambara
Haranuduvodu carmambara
Hariyu pusuvudu srigandha kasturi
Haranu pusuvudu smasanada budi ||
Hariya koralolu kaustubaranna
Harana koralolu garalada cihna
Hariya Ayudhavu varasankacakra
Harana Ayudhavu trisula Damaru ||
Hariya parivara brahmadi suraru
Harana parivara henana timbuvaru
Harihari emboru sirivamtaraguvaru
Harahara emboru hataraguvaru ||
Harige vahananada kagarajanu
Harage vahana gorajanu
Purandaravithalage sarasijasana putra
Hara agamokta Adanu pautra ||
Kannada:
ಹರಿ ಹರರು ಹೇಗೆ ಸಮರು
ಹರಿಹರ ಭಕ್ತರೆ ಇದಕೆ ಸಾಕ್ಷಿ ||ಪ||
ಹರಿಯ ಮಂದಿರ ವೈಕುಂಠಸ್ಥಾನ
ಹರನ ಮಂದಿರ ಶ್ಮಶಾನ
ಹರಿಯ ಪಟ್ಟದ ರಾಣಿ ಸಿರಿದೇವಿ ಎಂಬರು
ಹರನ ಪಟ್ಟದ ರಾಣಿ ಗಿರಿಜೆ ಎಂಬರು ||
ಹರಿಯು ಉಡುವೋದು ಪೀತಾಂಬರ
ಹರನುಡುವೋದು ಚರ್ಮಾಂಬರ
ಹರಿಯು ಪೂಸುವುದು ಶ್ರೀಗಂಧ ಕಸ್ತೂರಿ
ಹರನು ಪೂಸುವುದು ಶ್ಮಶಾನದ ಬೂದಿ ||
ಹರಿಯ ಕೊರಳೊಳು ಕೌಸ್ತುಭರನ್ನ
ಹರನ ಕೊರಳೊಳು ಗರಳದ ಚಿಹ್ನ
ಹರಿಯ ಆಯುಧವು ವರಶಂಖಚಕ್ರ
ಹರನ ಆಯುಧವು ತ್ರಿಶೂಲ ಡಮರು ||
ಹರಿಯ ಪರಿವಾರ ಬ್ರಹ್ಮಾದಿ ಸುರರು
ಹರನ ಪರಿವಾರ ಹೆಣನ ತಿಂಬುವರು
ಹರಿಹರಿ ಎಂಬೋರು ಸಿರಿವಂತರಾಗುವರು
ಹರಹರ ಎಂಬೋರು ಹತರಾಗುವರು ||
ಹರಿಗೆ ವಾಹನನಾದ ಖಗರಾಜನು
ಹರಗೆ ವಾಹನ ಗೋರಾಜನು
ಪುರಂದರವಿಠಲಗೆ ಸರಸಿಜಾಸನ ಪುತ್ರ
ಹರ ಆಗಮೋಕ್ತ ಆದನು ಪೌತ್ರ ||
See also:

Jaya Janaki Kantha