Aadidano ranga adbhutadindali kALingana phaNeyali
pADidavarige bEDida varagaLa neeDutali daya mADutali
nalidADutali beNNe bEDutali krishna
amburuhodbhava akhila suraru kooDi
ambaradali nintu avara stutise
rambe Urvashi ramaNiyarellaru
chendadim bharata nATyava naTise
jhamtaTa takadhimi tadhigiNi tom endu
jhampe tALadi tumburanoppise
da ma pa da sa ri endu dvaniyinda
nArada tumbura gAnava mADalu
nandiyu maddaLe chendadi hAkalu[1]
phaNava meTTi bAlava kaiyali piDidu phaLa phaLisutta
nATyavanADe chandra maNDaladante poLeyuva
mukhadoLu chalisuva neela kEshagaLADe kAlalanduge
gejje ghalu ghalu ghalurenuta uDi gejje ghaNTegaLADe
dushTa kALingana meTTi bharadinda puTTa pAdava iTTu
shrI krishNanu meTTidanu taka dhimi tadhikenuta[2]
suraru pushpada vrushTiya kareyalu sudatiyarellaru
pADalu nAga kannikeyaru nAthana bEDalu
nAnA vidhadi stuti mADalu rakkasarellaru
kakkasavane kaNDu dikku dikkugaLige Odalu
chikkavanivanalla purandara viTTala vEnkaTaramaNa
bEga yashOde binkadoLetti muddADe shrI krishNana[3]
In kannada:
ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ [ಪ]
ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ ಮಾಡುತಲಿ
ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ [ಅ ಪ]
ಅಂಬುರುಹೋದ್ಭವ ಅಖಿಳ ಸುರರು ಕೂಡಿ
ಅಂಬರದಲಿ ನಿಂತು ಅವರ ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು ಚಂದದಿಂ ಭರತನಾಟ್ಯವ ನಟಿಸೆ
ಝಂತಟ ತಕಧಿಮಿ ತಧಿಗಿಣಿ ತೋಂ ಎಂದು
ಝಂಪೆ ತಾಳದಿ ತುಂಬುರುನೊಪ್ಪಿಸೆ
ಧಾ ಮ ಪ ಧ ಸ ರೀ ಎಂದು ಧ್ವನಿಯಿಂದ ನಾರದ
ತುಂಬುರು ಗಾನವ ಮಾಡಲು ನಂದಿಯು ಮದ್ದಲೆ ಚೆಂದದಿ ಹಾಕಲು[1]
ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದು ಫಳಫಳಿಸುತ್ತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ
ಮುಖದೊಳು ಚಲಿಸುವ ನೀಲಕೇಶಗಳಾಡೆ
ಕಾಲಲಂದುಗೆ ಗೆಜ್ಜೆ ಘಲು ಘಲು ಘಲುರೆನುತ ಉಡಿಗೆಜ್ಜೆ ಘಂಟೆಗಳಾಡೆ
ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ ಪುಟ್ಟ ಪಾದವ ಇಟ್ಟು ಶ್ರೀ ಕೃಷ್ಣನು
ಮೆಟ್ಟಿದನು ತಕ ಧಿಮಿ ತಧಿಕೆನುತ[2]
ಸುರರು ಪುಷ್ಪದ ವೃಷ್ಟಿಯ ಕರೆಯಲು ಸುದತಿಯರೆಲ್ಲರು ಪಾಡಲು
ನಾಗಕನ್ನಿಕೆಯರು ನಾಥನ ಬೇಡಲು ನಾನಾ ವಿಧದಿ ಸ್ತುತಿ ಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು ದಿಕ್ಕು ದಿಕ್ಕುಗಳಿಗೆ ಓಡಲು
ಚಿಕ್ಕವನಿವನಲ್ಲ ಪುರಂದರ ವಿಠ್ಠಲ ವೆಂಕಟರಮಣ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀ ಕೃಷ್ಣನ[3]
Also View:
No comments:
Post a Comment