Links

Thursday, June 22, 2017

Yamanelli kaanenendu kelabeda




yamanelli kaanenendu helabeda
yamane shree raamanu sandeha beda 

nambida vibheeshanage raamanada
nambadidda ravanage yamanada 
nambida arjunage mitranada
nambadidda duryodhanage shatruvaada |
nambida prahladanige hariyada
nambadidda hiranyanige ariyada || 1 ||
nambida ugrasenage mrithyanada
nambadidda kamasanige shatruvada |
nambikolli bega shree krishnadevana
kambu chakradhari shree purandara vittalana || 2 ||

Kannada:
ಯಮನೆಲ್ಲಿ ಕಾಣೆನೆಂದು ಹೇಳಬೇಡ
ಯಮನೇ ಶ್ರೀ ರಾಮನು ಸಂದೇಹ ಬೇಡ || ಪ ||
ನಂಬಿದ ವಿಭೀಶಣಗೆ ರಾಮನಾದ
ನಂಬದಿದ್ದ ರಾವಣಗೆ ಯಮನಾದ || ಅ. ಪ ||
ನಂಬಿದ ಅರ್ಜುನಗೆ ಮಿತ್ರನಾದ
ನಂಬದಿದ್ದ ದುರ್ಯೋಧನಗೆ ಶತ್ರುವಾದ |
ನಂಬಿದ ಪ್ರಹ್ಲಾದನಿಗೆ ಹರಿಯಾದ
ನಂಬದಿದ್ದ ಹಿರಣ್ಯನಿಗೆ ಅರಿಯಾದ || ೧ || ಪ ||
ನಂಬಿದ ಉಗ್ರಸೇನಗೆ ಮ್ರಿಥ್ಯನಾದ
ನಂಬದಿದ್ದ ಕಂಸನಿಗೆ ಶತ್ರುವಾದ |
ನಂಬಿಕೊಳ್ಳಿ ಬೇಗ ಶ್ರೀ ಕೃಷ್ಣದೇವನ
ಕಂಬು ಚಕ್ರಧಾರಿ ಶ್ರೀ ಪುರಂದರ ವಿಟ್ಟಲನ || ೨ || ಪ ||

No comments:

Post a Comment