mUrutiyanu nillisO mAdhava ninna mUrutiyanu nillisO ||
eLetuLasiya vanamAleyu koraLoLu
hoLeva pItAMbaradiMdaloppuva ninna ||1||
muttina sara navaratnaduMguraviTTu
matte shrI lakumiyu uradaloppuva ninna ||2||
bhakta kalpataru bhaktara suradhEnu
muktidAyaka namma puraMdaraviThala ninna ||3||
Kannada:
ಕಾಫಿ ಕಾನಡಾ-ಶ್ರಿತಾಲ
ಮೂರುತಿಯನೆ ನಿಲಿಸೋ
ಮಾಧವ ನಿನ್ನ |
ಮಾಧವ ನಿನ್ನ |
ಎಳೆ ತುಳಸಿಯ ವನಮಾಲೆಯು ಕೊರಳೊಳು
ಪೊಳೆವ ಪೀತಾಂಬರದಿಂದ ಒಪ್ಪುವ ನಿನ್ನ ||
ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀಲಕುಮಿಯು ಉರದಿ ಒಪ್ಪುವ ನಿನ್ನ ||
ಭಕ್ತರ ಕಲ್ಪತರು ಭಾಗ್ಯದ ಸುರಧೇನು ಮುಕ್ತಿದಾಯಕ ನಮ್ಮ ಪುರಂದರ ವಿಟ್ಠಲ ||
-ಪುರಂದರದಾಸ
Youtube
No comments:
Post a Comment