kaNNinoLage nODo hariya
oLa kaNNInoLaginda nODO mujjagadoDeyana
AdhAra modalAda Aru cakra shOdhisi biDa bEku IsaNa mUru sADhisi suSumnA Eru alli bhEdisi nI parabrahmana sEru eve hAkade mEle nODi bEga pavananindali vAyu bandhana mADi savidu nAdava pAna mADi alli nava vidha bhaktili nalinalidADi aNDajadoLADutAne bhAnu maNDala nArAyaNanembOvane kuNDali tudiyoLiddAne shrI purandara viTTala pAlisutAne
Kannada:
ಕಣ್ಣಿನೊಳಗೆ ನೋಡೋ ಹರಿಯ
ಕಣ್ಣಿನೊಳಗೆ ನೋಡೋ |
ಒಳಗಣ್ಣಿನೊಳಗೆ ನೋಡೋ
ಹರಿಯ ಒಳಗಣ್ಣಿನೊಳಗೆ ನೋಡೋ ||
ಆಧಾರ ಮೊದಲಾದ ಆರು ಚಕ್ರ ಶೋಧಿಸಿ
ಬಿಡಬೇಕು ಈಷಣ ಮೂರು |
ಸಾಧಿಸಿ ಸುಷುಮ್ನಾ ಏರು
ಅಲ್ಲಿ ಭೇಧಿಸಿ ಪರಬ್ರಹ್ಮ ಸೇರು ||
ಎವೆ ಹಾಕದೆ ಮೇಲೆ ನೋಡಿ
ಬೇಗ ಪವನದಿಂದಲಿ ವಾಯು ಬಂಧನ ಮಾಡಿ |
ಸವಿದು ಪಾನವ ನೀ ಮಾಡಿ
ಅಲ್ಲಿ ನವವಿಧ ಭಕ್ತಿಯಲಿ ನಲಿದಾಡಿ ||
ಅಂಡಜದೊಳು ಆಡುತಾನೆ
ಭಾನುಮಂಡಲ ನಾರಾಯಣನೆಂಬುವನೆ |
ಕುಂಡಲಿ ತುದಿಯೊಳಿದ್ದಾನೆ
ಪುರಂದರ ವಿಠಲ ಪಾಲಿಸುತಾನೆ ||
YoutubeLink: kanninolage nodo hariya
Also View: