mahadadi deva namo
maha mahaniya namo
prahlada varada ahobala narasimha
dharanigubbasavage tarapathavu naduge
suraru kangettode nabhava bittu
tarugirigalallade saradhigalu kudidukke
uriyanuguluta udbhaviside narasimha
sidilante garjisuta kudiya nalige caci
adigadige langhisuta kadu kopadinda
mudivididu rakkasana kedahi nakhadindotti
kadu udara bagide (kadugala) narasimha
sarasijodbhava purandaradi samasta
suraru ambaradi pumaleya gareye
siri sahita garudadriyali nintu
bhakutaranu karuniside purandaravithala narasimha
Kannada
ಮಹದಾದಿ ದೇವ ನಮೋ
ಮಹಾ ಮಹನೀಯ ನಮೋ
ಪ್ರಹ್ಲಾದ ವರದ ಅಹೋಬಲ ನಾರಸಿಂಹ
ಧರಣಿಗುಬ್ಬಸವಾಗೆ ತಾರಾಪಥವು ನಡುಗೆ
ಸುರರು ಕಂಗೆಟ್ಟೊಡೆ ನಭವ ಬಿಟ್ಟು
ತುರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆ
ಉರಿಯನುಗುಳುತ ಉದ್ಭವಿಸಿದೆ ನಾರಸಿಂಹ
ಸಿಡಿಲಂತೆ ಗರ್ಜಿಸುತ ಕುಡಿಯ ನಾಲಿಗೆ ಚಾಚಿ
ಅಡಿಗಡಿಗೆ ಲಂಘಿಸುತ ಕಡು ಕೋಪದಿಂದ
ಮುಡಿವಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ
ಕಡು ಉದರ ಬಗಿದೆ ನಾರಸಿಂಹ
ಸರಸಿಜೋದ್ಭವ ಪುರಂದರಾದಿ ಸಮಸ್ತ
ಸುರರು ಅಂಬರದಿ ಪೂಮಳೆಗರೆಯೆ
ಸಿರಿ ಸಹಿತ ಗರುಡಾದ್ರಿಯಲಿ ನಿಂತು
ಭಕುತರನು ಕರುಣಿಸಿದೆ ಪುರಂದರಾವಿಠಲ ನಾರಸಿಂಹ
No comments:
Post a Comment