kaNDu kaNDu nIyenna kaiya biDuvare puNDarIkAkSa puruSOttama harE
bandhugaLu enagilla badukinali sukhavilla nindeyali nondenai nIrajAkSa
tande tAyiyu nInE bandhu baLagavu nInE endendigU ninna nambideno krSNa
kSaNavondu yugavAgi trNakinta kaDeyAgi eNisalArada bhavadi nonde nAnu
sanakAdi muni vandya vanaja sambhava janaka phaNishAyi prahlAdagolida shrI krSNa
bhaktavatsalanemba biruda pottA mEle bhaktarAdhInanAgira bEDavE
mukti dAyaka nInu honnUru puravAsa shakta guru purandara viTTala shrI krSNa
Kannada:
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ || ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನಯ್ಯ ನೀರಜಾಕ್ಷ ಬಂಧು ಬಳಗವು ನೀನೆ ತಂದೆತಾಯಿಯು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ ||
ಮೋಹನ*
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು | ಸನಕಾದಿ ಮುನಿವಂದ್ಯ ವನಜಸಂಭವಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ ||
ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ ಭಕ್ತರಾಧೀನನಾಗಿರಬೇಡವೆ | ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ ||
–ಪುರಂದರದಾಸ
No comments:
Post a Comment