pallavi
kaNDu kaNDu nIyenna kaiya biDuvare puNDarIkAkSa puruSOttama harE
charaNa 1
bandhugaLu enagilla badukinali sukhavilla nindeyali nondenai nIrajAkSa
tande tAyiyu nInE bandhu baLagavu nInE endendigU ninna nambideno kruShNa
charaNa 2
kShaNavondu yugavAgi truNakinta kaDeyAgi eNisalArada bhavadi nonde nAnu
sanakAdi muni vandya vanaja sambhava janaka phaNishAyi prahlAdagolida shrI kruShNa
charaNa 3
bhaktavatsalanemba biruda pottA mEle bhaktarAdhInanAgira bEDavE
mukti dAyaka naMa purandara viTTalane shakta neenahudendu nambideno Krushna
Kannada:
ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣ ಪುಂಡರೀಕಾಕ್ಷ ಶ್ರೀಪುರುಷೋತ್ತಮ ದೇವ ||
ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ ನಿಂದೆಯಲಿ ನೊಂದೆನಯ್ಯ ನೀರಜಾಕ್ಷ |
ಬಂಧು ಬಳಗವು ನೀನೆ ತಂದೆತಾಯಿಯು ನೀನೆ ಎಂದೆಂದಿಗೂ ನಿನ್ನ ನಂಬಿದೆನೋ ಶ್ರೀಹರಿಯೆ ||
ಮೋಹನ*
ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ ಎಣಿಸಲಾರದ ಭವದಿ ನೊಂದೆ ನಾನು |
ಸನಕಾದಿ ಮುನಿವಂದ್ಯ ವನಜಸಂಭವಜನಕ ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಹರಿಯೆ ||
ಭೈರವೀ*
ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ ಭಕ್ತರಾಧೀನನಾಗಿರಬೇಡವೆ |
ಮುಕ್ತಿದಾಯಕ ನಮ್ಮ ಪುರಂದರವಿಟ್ಠಲನೆ ಶಕ್ತ ನೀನಹುದೆಂದು ನಂಬಿದೆನೋ ಶ್ರೀಹರಿಯೆ ||
– ಪುರಂದರದಾಸ
Youtube link