Links

Saturday, March 12, 2016

Ragi tandira



rAgi tandIrA bhikShake rAgi tandIrA
yOgyarAgi bhOgyarAgi bhAgyavantarAgi nIvu ||pa.||
annadAnava mADuvarAgi annaChatravaniTTavarAgi
anyavArteya biTTavarAgi anudina bhajaneya mADuvarAgi ||1||
mAtApitaranu sEviparAgi pApakarmava biTTavarAgi
rItiya bALanu bALuvarAgi nItimArgadali khyAtarAgi ||2||
kAmakrOdhava aLidavarAgi nEmanityava mADuvarAgi
rAmanAmava japisuvarAgi prEmadi kuNikuNidADuvarAgi ||3||
siriramaNana dina neneyuvarAgi gurutige bAhOranthavarAgi
karedare bhavavanu nIguvarAgi puraMdara viThalana sEviparAgi ||4||
In kannada: 
ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು ||ಪ.||
ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ
ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ ||೧||
ಮಾತಾಪಿತರನು ಸೇವಿಪರಾಗಿ ಪಾಪಕರ್ಮವ ಬಿಟ್ಟವರಾಗಿ
ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ ||೨||
ಕಾಮಕ್ರೋಧವ ಅಳಿದವರಾಗಿ ನೇಮನಿತ್ಯವ ಮಾಡುವರಾಗಿ
ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ ||೩||
ಸಿರಿರಮಣನ ದಿನ ನೆನೆಯುವರಾಗಿ ಗುರುತಿಗೆ ಬಾಗೋರಂಥವರಾಗಿ
ಕರೆದರೆ ಭವವನು ನೀಗುವರಾಗಿ ಪುರಂದರ ವಿಠಲನ ಸೇವಿಪರಾಗಿ ||೪||

Also view: 

Friday, March 11, 2016

Krishna nee begane baaro





krishna baaro krishna baro
krishnayya nee baarayya ||pa||
saNNa hejjeyaniTTu gejjenaadagaLinda ||

manmathajanakane begane baaro
kamalaapati nee baaro
amitaparaakrama shankara baaro
kamaniya gaatrane baarayya doreye ||1||

suruLu keshagaLa oliva anda
bharada kasturi tilakada chanda
shiradi oppuva navilukaNgaLinda
taratarada aabharaNagaLa dharisi ni baaro ||2||

haalubeNNegaLa kaiyali koDuve
melaagi bhakshyagaLa muchchiTTu taruve
jaala maaDade baarayya mariye
baala enna tande purandaraviThala ||3||


In kannada: 

ಕೃಷ್ಣ ಬಾರೊ ಕೃಷ್ಣ ಬಾರೋ
ಕೃಷ್ಣಯ್ಯ ನೀ ಬಾರಯ್ಯ 

ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ 

ಮನ್ಮಥಜನಕನೆ ಬೇಗನೆ ಬಾರೊ
ಕಮಲಾಪತಿ ನೀ ಬಾರೊ
ಅಮಿತಪರಾಕ್ರಮ ಶಂಕರ ಬಾರೊ
ಕಮನೀಯ ಗಾತ್ರನೆ ಬಾರಯ್ಯ ದೊರೆಯೆ 

ಸುರುಳು ಕೇಶಗಳ ಒಲಿವ ಅಂದ
ಭರದ ಕಸ್ತೂರಿ ತಿಲಕದ ಚಂದ
ಶಿರದಿ ಒಪ್ಪುವ ನವಿಲುಕಣ್ಗಳಿಂದ
ತರತರದ ಆಭರಣಗಳ ಧರಿಸಿ ನೀ ಬಾರೊ 

ಹಾಲುಬೆಣ್ಣೆಗಳ ಕೈಯಲಿ ಕೊಡುವೆ
ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ಬಾರಯ್ಯ ಮರಿಯೆ
ಬಾಲ ಎನ್ನ ತಂದೆ ಪುರಂದರವಿಠಲ 


Youtube Link: By KS Chaitra

Thursday, March 10, 2016

Yaadava nee ba



Yaadava nee baa yadukula nandana
Madhava Madhusudana Baaro
Sodara Mavana Madhureli MaDuhida
Yashode nandana Nee Baro
Shanka Chakravu Kaiyali Holeyuta
Binkada Govala Nee Baro
Akalanka Mahimane Adi Narayana
Bekemba Bhaktarige olibaro
KaNa Kaalanduge Ghalu Ghalurenutali
Jhana Jhana VeNu naadadali
chinikolu chendu buguriya naaDuta
saNNa saNNa govaLa-rodagooDi
Khaga vaahanane bage bage rupane
nagemogadarasane nee baaro
jagadoLu ninnaya mahimeya pogaLuve
purandara viTThalane nee Baro


In kannada: 


ಯಾದವ  ನಿ  ಬಾ ಯದುಕುಲ  ನಂದನ
ಮಾಧವ  ಮಧುಸೂದನ  ಬಾರೋ  || pa||

ಸೋದರ  ಮಾವನ  ಮದುರಲಿ   ಮಡುಹಿದ
ಯಶೋದ  ಕಂದ ನೀ  ಬಾರೋ ||apa||
ಶಂಖ  ಚಕ್ರವು  ಕೈಯೇಲಿ  ಹೊಳೆಯುತ
ಬಿಂಕದ  ಕೋವಲ  ನಿ ಬಾರೋ
ಅಕಳಂಕ  ಮಹಿಮನೆ ಆದಿ 
ನಾರಾಯಣಬೇಕೆಂಬ  ಭಕ್ತರಿಗೊಲಿ  ಬಾರೋ  ||1||
ಕಣ  ಕಾಲಂದಿಗೆ  ಘಲು  ಘಲುರೆನುತಲಿ
ಝುಣು ಝುಣು ವೇಣು ನಾದದಲಿ
ಚಿಣ್ಣಿಕೋಲು ಚೆಂಡು  ಬುಗರಿಯನಾಡುತ  
ಸಣ್ಣ  ಸಣ್ಣ  ಗೋವಳರೊಡಗೂಡಿ  ||2||

ಖಗ ವಾಹನನೆ  ಬಗೆ  ಬಗೆ  ರೂಪನೆ
ನಗೆಮೊಗದರಸನೆ  ನಿ  ಬಾರೋ
ಜಗದೊಳು  ನಿನ್ನಯ  ಮಹಿಮೆಯ  ಪೋಗಳುವೆ
ಪುರಂದರ  ವಿಠ್ಠಲನೆ  ನೀ  ಬಾರೋ ||3||

Allide nam mane illi bande summane




Allide nam mane illi bande summane
Kada Bagilirisida Kalla Mane Idu
Mudadinda Lolado Sullu Mane
Idiragi Vaikuntha Vasa Maduvantha
Padumanabhana Divya Baduku Mane
Maligemaneyendu Nechchi Kedali Beda
Kelayya Harikathe Shravanangala
Nale Yamadootaru Bandeledoyvaga
Malige Maneyu Sngada Baradayya
Madadi Makkalemba Hambala Ninageko
Kadugobbuthanadali Mereyadiru
Odeya Sri Purandharavitthlarayana
Drudha Bhaktiyali Nee Bhajiselo Manuja

In kannada: 
 ಅಲ್ಲಿದೆ ನಮ್ ಮನೆ ಇಲ್ಲಿ ಬಂದೆ ಸುಮ್ಮನೆ 
ಕದ ಬಾಗಿಲಿರಿಸಿದ ಕಳ್ಳ ಮನೆ ಇದು 
ಮುದದಿಂದ  ಲೋಳದೋ ಸುಳ್ಳು ಮನೆ 
ಇದಿರಾಗಿ ವೈಕುಂಟ  ವಾಸ ಮಾಡುವಂತ  
ಪದುಮನಾಭ ದಿವ್ಯ ಬದುಕು ಮನೆ 
ಮಲಿಗೆಮನೆಯೆಂದು ನೆಚ್ಚಿ ಕೆಡಲಿ ಬೇಡ 
ಕೇಳಯ್ಯ ಹರಿಕಥೆ ಶ್ರವನಂಗಳ 
ನಾಳೆ ಯಮಧೂತರು ಬಂದೆಲೆದೊಯ್ಯವಾಗ 
ಮಳಿಗೆ ಮನೆಯು ಸಂಗದ ಬರದಯ್ಯ 
ಮಡದಿ ಮಕ್ಕಳೆಂಬ ಹಂಬಲ ನಿನಗೇಕೋ 
ಕದುಗೊಬ್ಬುಥನದಲ್ಲಿ ಮರೆಯದಿರು 
ಒಡೆಯ ಶ್ರೀ ಪುರಂದರ ವಿತ್ತಲ ರಾಯನ 
ದೃಢ ಭಕ್ತಿಯಲ್ಲಿ ನೀ ಭಾಜಿಸೆಲೋ ಮನುಜ 

Tamboori Meetidava



tamboori meeTidava bhavaabdhi daaTidava
taaLava taTTidava suraroLu sEridavaa

gejjeya kaTTidava khaLaredeya meeTTidava
gaanava paaDidava harimoorti nODidava

vittalana nodidavaa
(purandhara) vittalana nodidava vaikuntakke ODidavaa


In kannada: 

ತಂಬೂರಿ ಮೀಟಿದವ ಭವಾಬ್ಧಿ ದಾಟಿದವತಾಳವ ತಟ್ಟಿದವ ಸುರರೊಳು ಸೇರಿದವ
ಗೆಜ್ಜೆಯ ಕಟ್ಟಿದವ ಖಳರೆದೆಯ ಮೆಟ್ಟಿದವಗಾನವ ಪಾಡಿದವ ಹರಿ-ಮೂರುತಿ ನೋಡಿದವ
ವಿಠ್ಠಲನ ನೋಡಿದವಪುರಂದರ ವಿಠ್ಠಲನ ನೋಡಿದವ ವೈಕುಂಠಕೆ ಓಡಿದವ



Youtube Link

Ambegaalikkutali banda govinda


Ambegaalikkuta li banda govinda
Anbuja nabha dayadinda ennamanege |anupa|
Jalachara jalavasa dharanidhara mrugarupa
Nelanaledu muradi madi banda
Kulanasha vanavasa navanita choraniva
Lalaneyara vrata bhanga vahana turanga |1|
Kannabiduvanu tanna benna taggisuvanu
Mannu kedari kore baya taredu
Cinna bhargava lakshmanananna benneya kalla
Manava bittu kudureyanerida |2|
Nira pokkanu giriyanegehi dharaniya tandu
Naramruga balibanda koralugoyika
Sharamuridoraleledu niravani haya hatti
Purandara vitthala manege ta banda |3|
In kannada:  
ಅಮ್ಬೇಗಾಲಿಕ್ಕುತಲಿ ಬಂಡ ಗೋವಿಂದ  
ಅಂಬುಜ ನಾಭನು ದಯದಿಂದ ಎನ್ನ ಮನೆಗೆ 
ಜಲಚರ ಜಲವಾಸ ಧರನಿಧರ ಮ್ರುಗರೂಪ 
ನೆಲನಳೆದು ಮೂರಡಿ ಮಾಡಿ ಬಂಡ 
ಕುಲನಾಶ ವನವಾಸ ನವನೀತ ಚೋರ ನಿವ 
ಲಲನೆಯರ ವ್ರತ ಭಂಗ ವಾಹನ ತುರಂಗ 
ಕನ್ನಬಿದುವನು ತನ್ನ ಬೆನ್ನ ತಗ್ಗಿಸುವನು 
ಮಣ್ಣು ಕೆದರಿ ಕೋರೆ ಬಯ ತರೆದು 
ಚಿನ್ನ ಭಾರ್ಗವ ಲಕ್ಷ್ಮಣನ ಬೆಣ್ಣೆಯ ಕಳ್ಳ 
ಮಾನವ ಬಿಟ್ಟು ಕುದರೆಯನೆರಿಂದ 
ನೇರ ಪೋಕ್ಕನು ಗಿರಿಯ ನೆಗಾಹಿ ಧರಣಿಯ ತಂದು 
ನರಮ್ರುಗ ಬಳಿಬಂದ ಕೊರಲುಗೊಇಕ 
ಶರಮುರಿದು ಒರರೆಳೆದು ನಿರವಾಣಿ ಹಾಯ ಹತ್ತಿ 
ಪುರಂದರ ವಿತ್ತಲ ಮನೆಗೆ ತಾ ಬಂದ 



Bhagyaada lakshmi baaramma


bhAgyada lakShmI bArammA 
nammamma nI saubhAgyada 
lakShmI bArammA

hejjaya mele hhejjeyanikkuta 

gejje kAlgaLa dhvaniya madutha
sajjana sAdhu pUjeya vELege 
majjigeyoLagina beNNeyante(bhAgyada)

kanaka vrStiya kareyuta bAre 

mana kAmanaya siddhiya tOrE
dinakara kOTi tEjadi hoLeva 
janakarAyana kumAri bega(bhAgyada)

attittalagalade bhaktara maneyali 

nitya mahOtsava nitya sumangaLa
satyava tOruva sAdhu sajjanara
 cittadi hoLevA puttaLi bombe(bhAgyada)

sankhye illAda bhAgyava koTTu

 kankaNa kaiya tiruvuta bAre
kunkumAnkite pankaja lOcane
 venkaTaramaNana binkada rANI(bhAgyada)

sakkare tuppada kAluve harisi 

shukravAradha pUjaya vELageakkareyuLLa 
aLagiri rangana cokka purandara viThalana rANI(bhAgyada)

wiki about Purandara Dasa

Youtube Link: by MS Subbalakshmi

In kannada:  ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮಾ ಶ್ರೀ 
ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ


ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಗೆಜ್ಜೆ ಕಾಲ್‌ಗಳ ಧ್ವನಿಯ ತೋರುತ 
ಸಜ್ಜನ ಸಾಧು ಪೂಜೆಯ ವೇಳೆಗೆ 
ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕ ವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ಅವರ
ದಿನಕರ ಕೋಟಿ ತೇಜದಿ ಹೊಳೆಯುವ 
ಜನಕರಾಯನ ಕುಮಾರಿ ಬೇಗ

ಶಂಕೆ ಇಲ್ಲದ ಭಾಗ್ಯವ ಕೊಡಲು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ 
ವೆಂಕಟರಮಣನ ಬಿಂಕದ ರಾಣಿ

ಅತ್ತಿತ್ತಗಲದೆ ಭಕ್ತರ ಮನೆಯೊಳು
ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯದಿ ತೋರುತ ಸಾಧು ಸಜ್ಜನರಾ
ಚಿತ್ತದಿ ಹೊಳೆಯುವ ಪುತ್ತಳಿ ಗೊಂಬೆ

ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಆಳಗಿರಿ ರಂಗನ
ಚೊಕ್ಕ ಪುರಂದರವಿಠಲನ ರಾಣಿ

Also View: 


Achaaravillada naalige


Acaravillade Nalige Ninna Neecha Buddhiya Bidu Nalige
Vicaravillade Parara dooshisuvudakke Chaachi Kondiruvantha Nalige


 Pratakkaladoleddu Nalige Sri Patiyenna Barade Nalige
Patita Pavana Namma Rajapati Janakana Satatavu Nudi Kandya Nalige


Chadi Elalu Beda Nalige Ninna Bedikombenu Nalige
Rudhigodeya Shri Ramana Namava Paadutaliru Kandya Nalige


Hari Smarane Madu Nalige Narahariya Bhajisu Kandya Nalige
Varada Purandara Vittala Rayana Carana Kamala Nene Nalige


wiki about Purandara Dasa

Youtube Link : From Upaasane Movie

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುಧಿಯ ಬಿಡು ನಾಲಿಗೆ 
ವಿಚಾರವಿಲ್ಲದೆ ಪರರ ದೂಶಿಸುವುದಕ್ಕೆ ಚಾಚಿ ಕೊಂಡಿರುವಂಥ ನಾಲಿಗೆ 
ಪ್ರತಕ್ಕಾಳದೊಲೆದ್ದು  ನಾಲಿಗೆ ಶ್ರೀ ಪತಿಯೆನ್ನ ಬಾರದೆ ನಾಲಿಗೆ 
ಪತಿತ ಪಾವನ ನಮ್ಮ ರಜಪತಿ ಜನಕನ ಸತತವು ನುಡಿ ಕಂಡ್ಯ ನಾಲಿಗೆ
ಚಾಡಿ ಹೇಳಲು ಬೇಡ ನಾಲಿಗೆ ನಿನ್ನ ಬೇಡಿಕೊಮ್ಬೇನು ನಾಲಿಗೆ 
ರುಧಿಗೊದೆಯ ಶ್ರೀ ರಾಮನ ನಾಮವ ಆಡುತಿರಲು ಕಂಡ್ಯ ನಾಲಿಗೆ 
ಹರಿ ಸ್ಮರಣೆ ಮಾಡು ನಾಲಿಗೆ ನರಹರಿಯ ಭಜಿಸು ಕಂಡ್ಯ ನಾಲಿಗೆ 
ವರದ ಪುರಂದರ ವಿಠಲ ರಾಯನ ಚರಣ ಕಮಲಾ ನೆನೆ ನಾಲಿಗೆ